ನವದೆಹಲಿ, ಮೇ 25 (DaijiworldNews/MS): ಇತ್ತೀಚೆಗಷ್ಟೇ ಕೈ ಪಕ್ಷ ತೊರೆದಿದ್ದ, ಹಾರ್ದಿಕ್ ಪಟೇಲ್ "ಹಿಂದೂಗಳು ಮತ್ತು ಭಗವಾನ್ ರಾಮನ ಮೇಲೆ ನಿಮಗೇಕೆ ಇಷ್ಟೊಂದು ದ್ವೇಷ" ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ಭರತ್ಸಿಂಗ್ ಸೋಲಂಕಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನೀಡಿದ್ದಾರೆ ಎನ್ನಲಾದ ರಾಮ ಮಂದಿರದ ಇಟ್ಟಿಗೆ ಮೇಲೆ ನಾಯಿ ಮೂತ್ರ ಮಾಡುತ್ತದೆ ಎಂಬ ಆಕ್ಷೇಪಾರ್ಹ ಹೇಳಿಕೆಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಾರ್ದಿಕ್ ಪಟೇಲ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಪಕ್ಷವು ಜನರ ಭಾವನೆಗಳನ್ನು ನೋಯಿಸುವ ಕೆಲಸ ಮಾಡುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ. ಕಾಂಗ್ರೆಸ್ ಮುಂಖಡರೇ ಭಗವಾನ್ ಶ್ರೀರಾಮನೊಂದಿಗೆ ನಿಮಗ್ಯಾಕೆ ದ್ವೇಷವಿದೆ ? ನೀವು ಹಿಂದೂಗಳನ್ನು ಏಕೆ ದ್ವೇಷಿಸುತ್ತೀರಿ?ಶತಮಾನಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮಂದಿರವನ್ನು ನಿರ್ಮಿಸಲಾಗುತ್ತಿದೆ, ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದೇಕೆ?" ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಹಿಂದೂ ನಂಬಿಕೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ ಅವರು ರಾಮನ ಮತ್ತು ಹಿಂದುಗಳ ವಿರುದ್ಧ ದ್ವೇಷೆ ಏಕೆ ಎಂದು ಪಕ್ಷ ಮತ್ತು ಅದರ ಮುಖಂಡರನ್ನು ಪ್ರಶ್ನಿಸಿದ್ದಾರೆ.