ಬೆಂಗಳೂರು, ಮೇ 24 (DaijiworldNews/DB): ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಪಠ್ಯ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಅಡುಗೂರು ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಸಮಿತಿಯಲ್ಲಿ ಶಿಕ್ಷಣ ತಜ್ಞರಿಲ್ಲ. ಧರ್ಮಾಧಾರಿತವಾಗಿ ಪಠ್ಯ ಪುಸ್ತಕ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ತತ್ಕ್ಷಣ ಈ ಸಮಿತಿಯನ್ನು ರದ್ದುಗೊಳಿಸಿ ಹೊಸ ಸಮಿತಿ ಅಸ್ತಿತ್ವಕ್ಕೆ ತರಬೇಕು ಎಂದರು.
ಹಿಂದಿನ ಪುಸ್ತಕಗಳು ಸರಿಯಾಗಿವೆ ಎನ್ನುವುದಿಲ್ಲ. ಆದರೆ ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಅವಕಾಶಗಳಿವೆ. ನಿಯಮ ಪಾಲನೆ ಮಾಡದೆ ಪುಸ್ತಕ ಪರಿಷ್ಕರಣೆ ಮಾಡುವ ಸಮಿತಿ ರದ್ದತಿ ಅವಶ್ಯವಾಗಿದೆ ಎಂದವರು ತಿಳಿಸಿದರು.