ಕೇಂಬ್ರಿಡ್ಜ್, ಮೇ 24 (DaijiworldNews/DB): ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸುವ ಸಂಸ್ಥೆಗಳ ಮೇಲೆ ಭಾರತದಲ್ಲಿ ದಾಳಿಗಳು ನಡೆಯುತ್ತಿವೆ. ಮಾತಿನ ಮೇಲೆಯೂ ಪ್ರಹಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಿದ್ದ ''ಇಂಡಿಯಾ ಅಟ್ 75' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ದಾಳಿಯಾಗಿದೆ. ಮಾತುಗಳನ್ನು ಹತ್ತಿಕ್ಕುವ ಪ್ರಯತ್ನಾಗುತ್ತಿದೆ ಎಂದರು.
ಭಾರತ ಮಾತನಾಡಿದಾಗ ಮಾತು ಅದು ಜೀವಂತಿರುತ್ತದೆ. ಮೌನವಾದಾಗ ಸಾಯುತ್ತದೆ. ಆದರೆ ಈ ಮಾತಿಗೆ ಅವಕಾಶವಿರುವ ಸಂಸತ್, ಚುನಾವಣಾ ವ್ಯವಸ್ಥೆಯಂತ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಒಂದು ಸಂಘಟನೆಯು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಭಾರತ ಮಾತನಾಡದಂತೆ ಮಾಡುತ್ತಿದೆ. ಯಾವುದೇ ಒಂದು ಪ್ರಮುಖ ವಿಷಯ ಚರ್ಚೆಯಾದರೆ ಸರ್ಕಾರದ ಪ್ರಭಾವಿಗಳು ಅದನ್ನು ಹಾದಿ ತಪ್ಪಿಸಿ ಮಾತನ್ನೇ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ದ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.