ನಾಗ್ಪರ, ಮೇ 24 (DaijiworldNews/MS): ನೀರಿನ ಬಳಕೆಗೆ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದ ಮಾಲೀಕನ ನಡೆಯಿಂದ ನೊಂದ ದಂಪತಿಗಳು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗ್ಪುರದ ಕಲಾಮ್ನಾ ಪ್ರದೇಶದಲ್ಲಿನಡೆದಿದೆ.
ಮೃತರನ್ನು ಗೌರಿ ನಗರದ ನಿವಾಸಿಗಳಾದ ಹಳೆ ವಾಹನಗಳ ಡೀಲರ್ ಆಗಿದ್ದ ಮನೋಜ್ ವಾಸುದೇವ್ ಲೋಧಿ (45) ಮತ್ತು ಅವರ ಪತ್ನಿ ಮಮತಾ (40) ಎಂದು ಗುರುತಿಸಲಾಗಿದೆ.
ಸ್ಥಳದಿಂದ ವಶಪಡಿಸಿಕೊಂಡಿರುವ ಆತ್ಮಹತ್ಯಾ ಪತ್ರದಲ್ಲಿ ಮನೆ ಮಾಲೀಕ ಇಷ್ಫಾಕ್ ಶೇಖ್ ಅವರು ನೀರು ಬಳಕೆಗೆ ಹೆಚ್ಚಿನ ಶುಲ್ಕ ವಿಧಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಶವಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಘಟನೆ ಕುರಿತು ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಅಲ್ಲದೆ ಆತ್ಮಹತ್ಯೆ ಪತ್ರದ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಕಾಳಮ್ನ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.