ಚಂಡೀಗಢ, ಮೇ 24 (DaijiworldNews/MS): ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಖಚಿತವಾದ ಸಾಕ್ಷ್ಯಗಳು ದೊರೆತ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ.
ಸಿಂಗಲ್ ಗುತ್ತಿಗೆಗೆ ಅಧಿಕಾರಿಗಳಿಂದ 1% ಕಮಿಷನ್ ಕೇಳುತ್ತಿದ್ದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈ ಹಿಂದೆ ಯಾರಾದರೂ ಲಂಚ ಕೇಳಿದರೆ ಘಟನೆಯನ್ನು ದಾಖಲಿಸುವಂತೆ ಸಾರ್ವಜನಿಕರನ್ನು ಕೇಳಿದ್ದರು. ಪಕ್ಷದ ಭ್ರಷ್ಟಾಚಾರದ ವಿರೋಧಿ ಮಾದರಿಗೆ ಅನುಗುಣವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
ವೀಡಿಯೊ ಹೇಳಿಕೆಯಲ್ಲಿ, ಸಿಎಂ ಮಾನ್ "ಎಎಪಿ ಪ್ರಾಮಾಣಿಕ ಪಕ್ಷ. ನಮ್ಮ ಸರ್ಕಾರವು 1 ರೂಪಾಯಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.ನಾನು ರಾಜ್ಯದಾದ್ಯಂತ ಭೇಟಿಯ ಸಮಯದಲ್ಲಿ ಜನರ ದೃಷ್ಟಿಯಲ್ಲಿ ಹೊಸ ಭರವಸೆಯನ್ನು ನೋಡಿದ್ದೇನೆ - ಯಾರಾದರೂ ತಮ್ಮನ್ನು ಭ್ರಷ್ಟಾಚಾರದ ಕೆಸರಿನಿಂದ ಹೊರತರುತ್ತಾರೆಯೇ ಎಂದು ಅವರು ಕಾಯುತ್ತಿದ್ದಾರೆ.ಪಂಜಾಬ್ಗೆ ಮುಖ್ಯಮಂತ್ರಿ ನನ್ನನ್ನು ಘೋಷಿಸಬೇಕಾದಾಗ, ಅರವಿಂದ್ ಕೇಜ್ರಿವಾಲ್ ತಮ್ಮ ಭ್ರಷ್ಟಾಚಾರ ವಿರೋಧಿ ಗುರಿಯನ್ನು ನನಗೆ ಸ್ಪಷ್ಟಪಡಿಸಿದ್ದರು".
"ಈ ನಿಟ್ಟಿನಲ್ಲಿ ನಾವು ಸರಿಯಾಗಿ ಕೆಲಸ ಮಾಡುತ್ತೇವೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೆ. ಇತ್ತೀಚೆಗೆ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ನನ್ನ ಗಮನಕ್ಕೆ ಬಂದಿತ್ತು. ಈ ವಿಚಾರ ಮಾಧ್ಯಮದವರಿಗೆ ಗೊತ್ತೇ ಇರಲಿಲ್ಲ...ನಾವು ಈ ವಿಚಾರವನ್ನು ತಣ್ಣಗಾಗಿಸಬಹುದಿತ್ತು. . ಹಾಗೆ ಮಾಡಿದ್ದರೆ ನಮ್ಮನ್ನು ನಂಬಿ ಲಕ್ಷಾಂತರ ಮಂದಿಗೆ ದ್ರೋಹ ಬಗೆಯುತ್ತಿದ್ದೆ. ಹಾಗಾಗಿ ಸಚಿವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇನೆ" ಎಂದು ಮಾನ್ ಹೇಳಿದ್ದಾರೆ.