ಬೆಂಗಳೂರು, ಮೇ 24 (DaijiworldNews/HR): ಹೈಕಮಾಂಡ್ಗೆ ಬಿ.ಎಸ್ ವಿಜಯೇಂದ್ರ ಹೆಸರೂ ಶಿಫಾರಸು ಮಾಡಲಾಗಿತ್ತು.ಆದರೆ ಅವರಿಗೆ ಬೇರೆ ಬೇರೆ ಅವಕಾಶಗಳು ಇರುವುದರಿಂದ ಟಿಕೆಟ್ ಮಿಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಇಂದು ವಿಧಾನ ಪರಿಷತ್ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಘೋಷಿಸಿದ್ದು, ವಿಜಯೇಂದ್ರ ಹೆಸರೂ ಶಿಫಾರಸು ಮಾಡಲಾಗಿತ್ತು. ಆದರೆ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿಲ್ಲ. ವಿಜಯೇಂದ್ರಗೆ ಬೇರೆ ಬೇರೆ ಅವಕಾಶಗಳು ಇವೆ. ಅವರು ಪಕ್ಷದ ಉಪಾಧ್ಯಕ್ಷರು ಆಗಿದ್ದಾರೆ. ವಿಧಾನ ಪರಿಷತ್ಗೆ ಟಿಕೆಟ್ ಕೈತಪ್ಪಿರುವುದು ವರಿಷ್ಠರ ತೀರ್ಮಾನವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ವಿಧಾನ ಪರಿಷತ್ಗೆ ಟಿಕೆಟ್ ವಿಜಯೇಂದ್ರ ಅವರಿಗೆ ಲಭಿಸಬಹುದು ಎಂದು ಊಹಿಸಲಾಗಿತ್ತು, ಆದರೆ ಇದೀಗ ಟಿಕೆಟ್ ಕೈತಪ್ಪಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.