ಕೇರಳ, ಮೇ 24 (DaijiworldNews/HR): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ರ್ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಬಗ್ಗೆ ಕೇರಳ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಪಿಎಫ್ಐ ಸಂಘಟನೆಯು 'ಗಣರಾಜ್ಯವನ್ನು ಉಳಿಸಿ' ಅಭಿಯಾನದ ಭಾಗವಾಗಿ ಅಲಪ್ಪುಳದಲ್ಲಿ ಮೇ 21 ರಂದು ರ್ಯಾಲಿಯನ್ನು ಆಯೋಜಿಸಿದ್ದು, ಈ ವೇಳೆ ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತಿದ್ದ ಬಾಲಕ ಹಿಂದೂ, ಕ್ರಿಶ್ಚಿಯನ್ ಧರ್ಮೀಯರ ವಿರುದ್ಧ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಭಾರತೀಯ ಅಭಿಭಾಷಕ ಪರಿಷತ್ತಿನ ವಕೀಲ ವಿಜಯಕುಮಾರ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಆಧಾರದ ಮೇರೆಗೆ ಐಪಿಸಿ 153-ಎ (ಧರ್ಮದ ಮೇಲೆ ವಿನಾಕಾರಣ ನಿಂದನೆ ಅಥವಾ ದಾಳಿಯಲ್ಲಿ ತೊಡಗುವುದು) ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.