ಜಮ್ಮು ಕಾಶ್ಮೀರ, ಮೇ 24 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ನಲ್ಲಿ ಜನನದ ಬಳಿಕ ಸಾವನ್ನಪ್ಪಿದ ಹೆಣ್ಣು ಮಗುವನ್ನು ಸಮಾಧಿ ಮಾಡಲು ಕರೆದೊಯ್ದ ವೇಳೆ ಮಗು ಜೀವಂತವಾಗಿದ್ದ ಘಟನೆ ನಡೆದಿದೆ.
ಬಂಕೂಟ್ ನಿವಾಸಿ ಬಶರತ್ ಅಹ್ಮದ್ ಅವರ ಪತ್ನಿಗೆ ಬನಿಹಾಲ್ನ ಉಪಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಜನಿಸಿದ್ದು, ಆಸ್ಪತ್ರೆ ಸಿಬ್ಬಂದಿ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಇದರಿಂದ ಕುಟುಂಬದ ಸಮಸ್ಯರು ಮಗವಿನ ಅಂತ್ಯಸಂಸ್ಕಾರಕ್ಕಾಗಿ ಸಶ್ಮಾನಕ್ಕೆ ಕೊಂಡೊಯ್ದಿದ್ದಾರೆ. ಆದರೆ ಕುಟುಂಬದ ಸದಸ್ಯರು ಮಗು ಚಲಿಸುತ್ತಿರುವುದನ್ನು ಗಮನಿಸಿ ಇತರರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿಂದ ವಿಶೇಷ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಪೋಷಕರು ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ಕೂಡಲೇ ಸ್ಥಳಕ್ಕೆ ಎಸ್ಎಚ್ಒ ಬನಿಹಾಲ್ ಮುನೀರ್ ಖಾನ್ ನೇತೃತ್ವದ ಪೊಲೀಸ್ ತಂಡವು ಆಸ್ಪತ್ರೆಗೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು ಮತ್ತು ನಿರ್ಲಕ್ಷ್ಯಕ್ಕೆ ತಪ್ಪಿತಸ್ಥರೆಂದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.