ಬೆಂಗಳೂರು, ಮೇ 23 (DaijiworldNews/HR): ಟಿಪ್ಪು ಸುಲ್ತಾನ್ ಬಲವಂತವಾಗಿ ಟಿಪ್ಪು ಸುಲ್ತಾನ್ ಮತಾಂತರ ಮಾಡುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. ಕೊಡಗು, ಮೈಸೂರಿನಲ್ಲಿ ಟಿಪ್ಪು ಮತಾಂತರ ಮಾಡಿದ್ದು ಸತ್ಯ. ಅವರ ಬಗ್ಗೆ ನಿಜ ಬರೆಯಬೇಕಿತ್ತು. ಬ್ರಿಟಿಷರ ವಿರುದ್ದ ಹೋರಾಡಿದ್ದ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ , ಮದಕರಿ, ಎಲ್ಲರೂ ಬ್ರಿಟೀಷರ ವಿರುದ್ದ ಹೋರಾಡಿದವರೇ ಹಿಂದೂ ಎಂಬ ಕಾರಣಕ್ಕೆ ಅವರನ್ನೆಲ್ಲಾ ಕೈಬಿಟ್ಟು, ಟಿಪ್ಪು ಬಗ್ಗೆ ಮಾತ್ರ ಆರು ಪುಟ ಪಠ್ಯ ಸೇರಿಸಿದ್ದರು. ಬರಗೂರು ರಾಮಚಂದ್ರಪ್ಪರಂತೆ ನಾವು ಕೆಟ್ಟರಾಜಕೀಯ ನಾವು ಮಾಡುವುದಿಲ್ಲ, ಟಿಪ್ಪು ಸುಲ್ತಾನ್ ಪಠ್ಯ ತೆಗೆದಿಲ್ಲ. ಇಂತಹ ಸತ್ಯವನ್ನು ಅಳವಡಿಸಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಮ್ಮ ಸರ್ಕಾರದ ಕೆಲಸಗಳನ್ನು ಸಹಿಸಿಕೊಳ್ಳದೇ ಅನಾವಶ್ಯಕವಾಗಿ ಸುಳ್ಳು ಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಇನ್ನು ಕಳೆದ ವರ್ಷ ಹಲವರು ಕಾರಣಗಳಿಂದ ಶಾಲೆ ಆರಂಭವಾಗಲ್ಲ ಎಂದಿದ್ದರು. ಶಾಲೆ ಪ್ರಾರಂಭ ಎಂದಾಗಲೂ ಕೊರೊನಾ ನೆಪ ಹೇಳಿದ್ದರು. ಬಡವರ ಪ್ರಾಣದ ಜತೆ ಚೆಲ್ಲಾಟ ಎಂದಿದ್ದರು. ಹಿಜಾಬ್ ವಿಚಾರದಲ್ಲಿ ತಗಾದೆ ತೆಗೆದರು. ಅದು ಸರಿಯಾಗಲಿಲ್ಲ. ಕೋರ್ಟ್ ಆದೇಶ ಬಂದಾಗ ಅದನ್ನೂ ಸಹಿಸಲಿಲ್ಲ. ಬೊಮ್ಮಾಯಿ ಸರ್ಕಾರದ ಕೆಲಸಗಳನ್ನು ಸಹಿಸದೇ ವಿರೋಧ ಪಕ್ಷದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.