ಗುವಾಹಟಿ, ಮೇ 23 (DaijiworldNews/HR): ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಆರು ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರು ಹೊಸ ಸಾವುಗಳಲ್ಲಿ, ನಾಲ್ಕು ನಾಗಾನ್ನಿಂದ ಮತ್ತುಹೋಜೈ ಮತ್ತು ಕ್ಯಾಚಾರ್ ಜಿಲ್ಲೆಗಳಿಂದ ತಲಾ ಒಂದು ಸಾವು ವರದಿಯಾಗಿದ್ದು, ಇದರಲ್ಲಿ 19 ಜನರು ಪ್ರವಾಹದಲ್ಲಿ ಮತ್ತು ಐವರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಇನ್ನು ರಾಜ್ಯದ 22 ಜಿಲ್ಲೆಗಳ 2,095 ಗ್ರಾಮಗಳಲ್ಲಿ 1,41,050 ಮಕ್ಕಳು ಸೇರಿದಂತೆ ಒಟ್ಟು 7,19,425 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದು, ವಿಪತ್ತು ಪ್ರತಿಕ್ರಿಯೆ ಪಡೆಗಳು ಮತ್ತು ಸ್ವಯಂಸೇವಕರ ಸಹಾಯದಿಂದ ಒಟ್ಟು 26,489 ಜನರನ್ನು ಸ್ಥಳಾಂತರಿಸಲಾಗಿದೆ.