ಬೆಂಗಳೂರು, ಮೇ 23 (DaijiworldNews/HR): ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ನೀಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಕೃತ್ಯದ ಹಿಂದೆ 17 ವರ್ಷದ ಬಾಲಕ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ತಮಿಳುನಾಡು ಮೂಲದ 17 ವರ್ಷದ ಬಾಲಕ ಸಾಫ್ಟ್ ವೇರ್ ಕಂಪನಿ ಮಾಡುವ ಉದ್ದೇಶ ಹೊಂದಿದ್ದು, ವಿದೇಶಿಯರಿಗೆ ಕಂಪ್ಯೂಟರ್ ಪ್ರೊಗ್ರಾಂ ಮಾಡಿ ಮಾರಾಟ ಮಾಡಿದ್ದ. ಇದೇ ಸಾಫ್ಟ್ ವೇರ್ ಪ್ರೊಗ್ರಾಂ ಮೂಲಕ ಬೆಂಗಳೂರು ಹಾಗೂ ಭೋಪಾಲ್ ಶಾಲೆಗಳಿಗೆ ದುಷ್ಕರ್ಮಿಗಳು ಬೆದರಿಕೆ ಇ-ಮೇಲ್ ರವಾನಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಬಾಲಕ ಬೋಟ್ ಸಾಫ್ಟ್ ವೇರ್ ಪ್ರೊಗ್ರಾಂ ಅಭಿವೃದ್ಧಿಪಡಿಸಿದ್ದು, 200 ಡಾಲರ್ ಬಿಟ್ ಕಾಯಿನ್ ಮೂಲಕ ಸಾಫ್ಟ್ ವೇರ್ ಮಾರಾಟ ಮಾಡಿದ್ದ. ಈ ಸಾಫ್ಟ್ ವೇರ್ ಮೂಲಕ ಮಲ್ಟಿಪಲ್ ಮೇಲ್ಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಐಪಿ ಅಡ್ರೆಸ್ ಮೂಲಕ ಬಾಲಕನನ್ನು ಪತ್ತೆ ಹಚ್ಚಲಾಗಿದ್ದು, ಬಾಂಬ್ ಬೆದರಿಕೆ ಕರೆಗೆ ಈ ಬಾಲಕನನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.