ಮುಂಬೈ, ಮೇ 23 (DaijiworldNews/HR): ಕೇವಲ 11 ದಿನಗಳಲ್ಲಿ ಮುಂಬೈನ 10 ವರ್ಷದ ಸ್ಕೇಟರ್ 'ರಿದಮ್ ಮಮಾನಿಯಾ' ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.
ಮೇ 6 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಂದ್ರಾದ ಎಂಇಟಿ ಋಷಿಕುಲ್ ವಿದ್ಯಾಲಯದ 5 ನೇ ತರಗತಿ ವಿದ್ಯಾರ್ಥಿನಿ ರಿದಮ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದು, ಬೇಸ್ ಕ್ಯಾಂಪ್ 5,364 ಮೀಟರ್ನಲ್ಲಿದೆ. ಇದನ್ನು ಹತ್ತಲು 11 ದಿನಗಳನ್ನು ತೆಗೆದುಕೊಳ್ಳಲಾಯಿತು ಎಂದು ಬಾಲಕಿಯ ತಾಯಿ ಉರ್ಮಿ ತಿಳಿಸಿದ್ದಾರೆ.
ಇನ್ನು ಐದನೇ ವಯಸ್ಸಿನಿಂದಲೂ ರಿದಮ್ ಪರ್ವತಗಳನ್ನು ಹತ್ತಲು ಇಷ್ಟಪಡುತ್ತಿದ್ದು, ಅವರ ಮೊದಲ ಸುದೀರ್ಘ ಚಾರಣವು 21-ಕಿಮೀ ದೂಧಸಾಗರ್ ಆಗಿತ್ತು. ಮಾಹುಲಿ, ಸೊಂಡೈ, ಕರ್ನಾಲಾ ಮತ್ತು ಲೋಹಗಡ್ನಂತಹ ಸಹ್ಯಾದ್ರಿ ಶ್ರೇಣಿಗಳಲ್ಲಿ ಕೆಲವು ಶಿಖರಗಳನ್ನು ಏರಿದ್ದಾಳೆ ಎಂದು ಹೇಳಿದ್ದಾರೆ.