ಸತಾರಾ, ಮೇ 23 (DaijiworldNews/MS): ಎಲೆಕ್ಟ್ರಿಕ್ ಬೈಕ್ನ ಬ್ಯಾಟರಿ ಚಾರ್ಜ್ ಮಾಡುವಾಗ ಯುವತಿಯೊಬ್ಬಳು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾಳೆ.ಕರಾದ್ನ ಮೋಪ್ರೆ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಮೃತರನ್ನು ಶಿವಾನಿ ಪಾಟೀಲ್ ಎಂದು ಗುರುತಿಸಲಾಗಿದೆ.
ಕರಡ್ ಗ್ರಾಮಾಂತರ ಠಾಣೆ ಪೊಲೀಸರ ಪ್ರಕಾರ, ಮೊಪ್ರೆ ನಗರದ ಶಿವಾನಿ ಪಾಟೀಲ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಸುತ್ತಿದ್ದರು. ಭಾನುವಾರ ಊರಿಂದ ಹೊರ ಹೋಗುತ್ತಿದ್ದ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ಪರಿಶೀಲಿಸಿದರು.
ಚಾರ್ಜಿಂಗ್ ಕಡಿಮೆ ಆಗಿರುವುದನ್ನು ಗಮನಿಸಿದ ಶಿವಾನಿ ಬೈಕ್ನ ಬ್ಯಾಟರಿ ತೆಗೆದು ಚಾರ್ಜ್ ಮಾಡಲು ಮನೆಗೆ ತೆರಳಿದ್ದಾರೆ. ಆದರೆ, ಬ್ಯಾಟರಿ ಚಾರ್ಜ್ ಮಾಡಲು ಯತ್ನಿಸುತ್ತಿದ್ದಾಗ ಶಿವಾನಿಹೆ ವಿದ್ಯುತ್ ಸ್ಪರ್ಶಿಸಿದೆ. . ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ತಕ್ಷಣ ಮ ಕುಟುಂಬಸ್ಥರು ಚಿಕಿತ್ಸೆಗಾಗಿ ಕರಡ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ನೀಡುವ ಮುನ್ನವೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ತಡರಾತ್ರಿ ಶೋಕದ ವಾತಾವರಣದಲ್ಲಿ ಶಿವಾನಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಘಟನೆ ಸಂಬಂಧ ಕರಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.