ಮುಂಬೈ, ಮೇ 22 (DaijiworldNews/SM): ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ದರದ ಮೇಲಿನ ಅಬಕಾರಿ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕೆಲವು ರಾಜ್ಯಗಳು ಕೇಂದ್ರದ ನೀತಿಯನ್ನು ಸ್ವಾಗತಿಸಿ ಆ ಹಾದಿಗೆ ರಾಜ್ಯದ ಪಾಲು ನೀಡಲು ಮುಂದಾಗಿವೆ. ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿ ಒಂದಿಷ್ಟು ಇಳಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಡಬಲ್ ಧಮಾಕ ನೀಡಿದೆ.
ಪೆಟ್ರೋಲ್ ಮೇಲೆ 2.08 ರೂ ಹಾಗೂ ಡೀಸೆಲ್ ಮೇಲೆ 1.44 ರೂ ವ್ಯಾಟ್ ಇಳಿಸುವುದಾಗಿ ಮಹಾರಾಷ್ಟ್ರ ಸರಕಾರ ಘೋಷಿಸಿದೆ. ಕೇಂದ್ರ, ರಾಜ್ಯದ ಈ ನಿರ್ಧಾರಗಳಿಂದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 11 ರೂಪಾಯಿಗೂ ಹೆಚ್ಚು ದರ ಇಳಿಕೆಯಾದಂತಾಗಿದೆ. ಮತ್ತೊಂದೆಡೆ, ಡೀಸೆಲ್ ಬೆಲೆ ಎಂಟೂವರೆ ರೂನಷ್ಟು ಕಡಿಮೆಯಾಗಿದೆ.
ಮಹಾರಾಷ್ಟ್ರದ ಬೆನ್ನಲ್ಲೆ, ರಾಜಸ್ಥಾನವೂ ಕೂಡ ಬೆಲೆ ಇಳಿಸುವ ನಿರ್ಧಾರಕ್ಕೆ ಬಂದಿದೆ.