ದಾವಣಗೆರೆ, ಮೇ 22 (DaijiworldNews/HR): ಮಾಜಿ ಸಚಿವ, ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ್ದ ಪ್ರಕರಣ ದಾಖಲಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಬೈರನಹಳ್ಳಿ ಗ್ರಾಮದಲ್ಲಿ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದು, ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು.
ಇನ್ನು ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ತಾವೇ ಚಲಾಯಿಸಿ ಗಮನ ಸೆಳೆದಿದ್ದರು.
ಈ ಹಿಂದೆಯೂ ಶಾಸಕರು ಬಸ್ ಓಡಿಸಿ ಗಮನ ಸೆಳೆದಿದ್ದು, ಲೈಸನ್ಸ್ ಇಲ್ಲದೇ ಶಾಸಕ ರೆಣುಕಾಚಾರ್ಯ ಬಸ್ ಓಡಿಸಿದ್ದಕ್ಕಾಗಿ ಇದೀಗ ಶಾಸಕರ ವಿರುದ್ಧ ಕೇಸ್ ದಾಖಲಾಗಿದೆ.