ಹೈದರಾಬಾದ್, ಮೇ 22 (DaijiworldNews/HR): ಬೈಕ್ನಲ್ಲಿ ಹೋಗುತ್ತಿದ್ದಾಗ ಧರಿಸಿರುವ ಬುರ್ಖಾ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಹೈದರಾಬಾದ್ನ ಯಾಚರಂನಲ್ಲಿ 18 ವರ್ಷದ ಯುವತಿ ಮತ್ತು ಆಕೆಯ ಸಹೋದರ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಯುವತಿ, ಬೈಕ್ ಹಿಂದುಗಡೆ ಕುಳಿತು ಸಹೋದರನ ಜತೆ ಪ್ರಾಯಾಣಿಸುತ್ತಿದ್ದು, ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ಅವರ ಬುರ್ಖಾ ಚಕ್ರದಲ್ಲಿ ಸಿಲುಕಿಕೊಂಡಿದ್ದು, ಆಯ ತಪ್ಪಿ ಬಿದ್ದಿದ್ದಾರೆ. ಅವರ ಸಹೋದರ ಕೂಡ ಆಯತಪ್ಪಿದ್ದರಿಂದ ಬೈಕ್ ಕೆಳಕ್ಕೆ ಬಿದ್ದಿದೆ. ಯುವತಿಗೆ ಗಂಭೀರವಾದ ಗಾಯಗಳಾಗಿದ್ದವು. ಆಸ್ಪತ್ರೆಗೆ ಸೇರಿಸಿದರೂ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ.