ಬೆಂಗಳೂರು, ಮೇ 22 (DaijiworldNews/HR): ರಾಜ್ಯಾಧ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಮೇ.15 ರಿಂದ 21ರವರೆಗೆ 12 ಮಂದಿ ಸಾವನ್ನಪ್ಪಿದ್ದು, 430 ಜಾನುವಾರುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಳೆ ಹಾನಿ ಸಂಬಂಧ ಸೂಕ್ತ ಪರಿಹಾರ ಕಾರ್ಯ ಹಾಗೂ ನೆರವು ವಿತರಣೆ ಸಂಬಂಧ ಮುಂದಿನ 15 ದಿನಗಳವರೆಗೆ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳಿಗೆ ರಜೆ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಿಎಂ, ಮೇ.15 ರಿಂದ ಮೇ 21ರವರೆಗೆ ರಾಜ್ಯಾಧ್ಯಂತ ಮಳೆಯಿಂದಾಗಿ 12 ಜನರ ಪ್ರಾಣ ಹೋಗಿದ್ದು, 430 ಜಾನುವಾರುಗಳ ಸಾವನ್ನಪ್ಪಿವೆ. 1431 ಮನೆಗಳಿಗೆ ನೀರು ನುಗ್ಗಿದೆ. 4242 ಮನೆಗಳಿಗೆ ಭಾಗಶ: ಹಾನಿಯಾಗಿದೆ ಎಂದು ತಿಳಿಸಿದ್ದಾರೆ.