ಬೆಂಗಳೂರು, ಮೇ 21 (DaijiworldNews/MS): ದಶಕಗಳ ಶ್ರಮದಿಂದ ಕಾಂಗ್ರೆಸ್ ಕಟ್ಟಿ ಬೆಳೆಸಿರುವುದನ್ನು, ಬಿಜೆಪಿ ಮಾರುವ ಕೆಲಸವನ್ನು ಮಾಡುತ್ತಿದೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಟ್ಟಿ ಬೆಳೆಸಿರುವುದನ್ನು ಬಿಜೆಪಿ ಮಾರುತ್ತಿದೆ. ಈ ಪಕ್ಷದ ಸ್ವಂತ ಬಂಡವಾಳ ಯಾವುದೂ ಇಲ್ಲ ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇದೀಗ ಬಿಎಸ್ಎನ್ಎಲ್ ಅನ್ನು ದುರ್ಬಲಗೊಳಿಸಿ ಅದನ್ನು ಬೇರೆಯವರಿಗೆ ಮಾರಲು ತಯಾರಿ ನಡೆಸಿದ್ದಾರೆ ಎಂದು ದೂರಿದರು.
ಜೈಪುರದ ಚಿಂತನಾ ಶಿಬಿರದಲ್ಲಿ ಪ್ರದಾನಿ ಮೋದಿ ಅವರು ಮನೆ ಮನೆಗೆ ಹೋಗಿ ನಾವು ಮಾಡಿದ ಕೆಲಸ ತಿಳಿಸಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ಅವರು ಮಾಡಿರುವ ಕೆಲಸವಾದರೂ ಏನು ? ಅವರು ಮಾಡಿರುವ ಜನರಿಗೆ ಗೊತ್ತೇ ಇಲ್ಲ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ರಾಜೀವ್ ಗಾಂಧಿ ಅವರನ್ನು ಸ್ಮರಿಸಿದ ಅವರು ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ ಎಂದು ಹೊಗಳಿದರು.