ನವದೆಹಲಿ, ಮೇ 21 (DaijiworldNews/MS): ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 8 ರೂಪಾಯಿ ಮತ್ತು ಡೀಸೆಲ್ಗೆ 6 ರೂಪಾಯಿ ಕಡಿಮೆ ಮಾಡಿದೆ.
ಇಂದು ಸುದ್ದಿಗೋಷ್ಟಿಯನ್ನು ಮಾತನಾಡಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್ಗೆ ₹ 8 ಮತ್ತು ಡೀಸೆಲ್ ಮೇಲೆ ₹ 6 ರಷ್ಟು ಕಡಿಮೆ ಮಾಡಲು ಕೇಂದ್ರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
"ಈ ಕ್ರಮವು ಪ್ರತಿ ಲೀಟರ್ ಪೆಟ್ರೋಲ್ಗೆ ₹ 9.5 ಮತ್ತು ಡೀಸೆಲ್ಗೆ ₹ 7 ರಷ್ಟು ಕಡಿಮೆ ಮಾಡುತ್ತದೆ ಆದರೆ ಇದು ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹ 1 ಲಕ್ಷ ಕೋಟಿ ಆದಾಯದ ಮೇಲೆ ಪ್ರಭಾವ ಬೀರುತ್ತದೆ " ಎಂದು ಹಣಕಾಸು ಸಚಿವರು ಹೇಳಿದ್ದಾರೆ.