ನವದೆಹಲಿ, ಮೇ 21 (DaijiworldNews/HR): ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡತನ ಕಡಿಮೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ, ರಾಜವಂಶ ಮತ್ತು ಪ್ರಾದೇಶಿಕತೆ ರಾಜಕಾರಣವನ್ನು ಬದಿಗಿಟ್ಟು ದೇಶದಲ್ಲಿ ಅಭಿವೃದ್ಧಿ ರಾಜಕಾರಣದ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಈ ಕುರಿತು ಮಾತನ್ಮಾಡಿದ ಅವರು, ಜಾತಿವಾದ, ಪ್ರಾದೇಶಿಕತೆ, ಕೋಮುವಾದ ಮತ್ತು ರಾಜವಂಶದ ರಾಜಕಾರಣವನ್ನು ಕೆಡವುವ ಮೂಲಕ ಮೋದಿಯವರ ನಾಯಕತ್ವವು ಅಭಿವೃದ್ಧಿ ರಾಜಕಾರಣದ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸಿದೆ ಎಂದರು.
ಇನ್ನು ಮೋದಿ ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೇ 30 ರಿಂದ ಜೂನ್ 15 ರವರೆಗೆ 'ಸೇವಾ ಸುಶಾಶನ್' ಮತ್ತು 'ಗರೀಬ್ ಕಲ್ಯಾಣ್' ವಿಷಯದ ಮೇಲೆ ಬಿಜೆಪಿ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲಿದೆ ಎಂದು ತಿಳಿಸಿದ್ದಾರೆ.