ಬೆಂಗಳೂರು, ಮೇ 21(DaijiworldNews/DB): ಯೋಗ್ಯತೆ ಇದ್ದರೆ ಬೆಂಗಳೂರಿನ ಸಮಸ್ಯೆಯನ್ನು ಬಗೆಹರಿಸಿ. ನನ್ನ ಆರೋಗ್ಯ ನೋಡಿಕೊಳ್ಳಲು ದೇವರಿದ್ದಾರೆ. ಅದರ ಬಗ್ಗೆ ಸೋಮಣ್ಣ ನವರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಬೆಂಗಳೂರು ಪ್ರದಕ್ಷಿಣೆಗೆ ಕುರಿತು ವ್ಯಂಗ್ಯವಾಡಿದ ವಿ.ಸೋಮಣ್ಣಅವರಿಗೆ ತಿರುಗೇಟು ನೀಡಿದ ಎಚ್ಡಿಕೆ, ನಾನು ಬೆಂಗಳೂರನ್ನು ಹುಟ್ಟಿದಾಗಿನಿಂದಲೇ ನೋಡುತ್ತಿದ್ದೇನೆ. ಬೆಂಗಳೂರಿನ ಬಗ್ಗೆ ಸೋಮಣ್ಣನವರಿಗೆ ನಾನೇ ಪಾಠ ಮಾಡುತ್ತೇನೆ. ಬಿಡುವಿದ್ದರೆ ಅವರು ಬರಲಿ. ದೇವೇಗೌಡರ ಹೆಸರು ಹೇಳಿಕೊಂಡು ಅವರು ಹೇಗೆ ಬೆಳೆದಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸಾಧ್ಯವಾದರೆ ಸೋಮಣ್ಣನವರೇ ಬೆಂಗಳೂರಿನ ಸಮಸ್ಯೆಯನ್ನು ಬಗೆಹರಿಸಲಿ ಎಂದರು.
ನನ್ನ ಬಗ್ಗೆ ಲಘುವಾಗಿ ಮಾತನಾಡಿದರೆ ನನಗೂ ಮಾತನಾಡಲು ಹಲವು ವಿಷಯಗಳಿವೆ. ಬೆಂಗಳೂರು ಸ್ವಿಮ್ಮಿಂಗ್ ಫೂಲ್ ಆಗಿದೆ. ನನ್ನ ಆರೋಗ್ಯದ ಬಗ್ಗೆ ಚಿಂತಿಸಬೇಡಿ. ನೀವು ಐದು ವರ್ಷದಲ್ಲಿ ಏನು ಮಾಡಿದ್ದೀರಿ ಎಂಬುದನ್ನು ಮೊದಲು ಹೇಳಿ ಎಂದು ಎಚ್ಡಿಕೆ ಅವರು ರೇವಣ್ಣರನ್ನು ತರಾಟೆಗೆ ತೆಗೆದುಕೊಂಡರು.