ಬೆಳಗಾವಿ, ಮೇ 21 (DaijiworldNews/HR): ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಜನರಿಗೆ ಉಚಿತ ಎಲ್ಲಾ ವಸ್ತುಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ದಶಕಗಳಿಂದಲೂ ಮೋಸಗಾರಿಕೆ ಮಾಡಿಕೊಂಡೇ ಆಡಳಿತ ಮಾಡಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಎಂ ಆದ್ರೆ ಸಾಲಮನ್ನಾ ಮಾಡುತ್ತೇನೆ, 10 ಕೆಜಿ ಅಕ್ಕಿ ನೀಡ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜನರಿಗೆ ನಿಮ್ಮ ಉಚಿತ ವಸ್ತುಗಳು ಬೇಕಾಗಿಲ್ಲ, ಮೊದಲು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ಇನ್ನು ಕಾಂಗ್ರೆಸ್ ಪಕ್ಷವು ಇದೇ ಮೋಸಗಾರಿಕೆ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ಮಾಡಿದೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ, 2024ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಜನರಿಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.