ನವದೆಹಲಿ, ಮೇ 21 (DaijiworldNews/HR): ಹೈದರಾಬಾದ್ನಲ್ಲಿ ಕರೋನವೈರಸ್ನ ಓಮಿಕ್ರಾನ್ ಸ್ಟ್ರೈನ್ನ ಬಿಎ.4 ಸಬ್ವೇರಿಯಂಟ್ನ ಭಾರತದ ಮೊದಲ ಪ್ರಕರಣವನ್ನು ಜೀನೋಮಿಕ್ ಕಣ್ಗಾವಲು ಕಾರ್ಯಕ್ರಮದ ಮೂಲಕ ಪತ್ತೆಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
'ಭಾರತದ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ ಭಾರತದಲ್ಲಿ ಬಿಎ.4 ಓಮಿಕ್ರಾನ್ ರೂಪಾಂತರದ ಮೊದಲ ಪ್ರಕರಣವನ್ನು ಹೈದರಾಬಾದ್ನಲ್ಲಿ ಪತ್ತೆಹಚ್ಚಲಾಗಿದೆ.
ಬಿಎ.4 ರ ಮೊದಲ ಪ್ರಕರಣ ಪತ್ತೆಯಾದ ಬಳಿಕ ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್ಗೆ ಪ್ರಯಾಣಿಸಿದ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಸಂಪರ್ಕವನ್ನು ಪತ್ತೆಹಚ್ಚಲು ಪ್ರಾರಂಭಿಸಲಾಗಿದೆ.
ಇನ್ನು ಓಮಿಕ್ರಾನ್ ನ ಬಿಎ.4 ಮತ್ತು ಬಿಎ.5 ಎರಡೂ ರೂಪಾಂತರಗಳು ದಕ್ಷಿಣ ಆಫ್ರಿಕಾದಲ್ಲಿ ಐದನೇ ಕೋವಿಡ್ ತರಂಗದೊಂದಿಗೆ ಸಂಬಂಧ ಹೊಂದಿವೆ ಮತ್ತು ಇತ್ತೀಚೆಗೆ ಯುಎಸ್ ಮತ್ತು ಯುರೋಪ್ ಕೂಡ ವರದಿ ಮಾಡಿದೆ.