ಮುಂಬಯಿ, ಮೇ 21 (DaijiworldNews/HR): ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಧ್ಯಮ ವಲಯದ ಮಾಜಿ ಅಧಿಕಾರಿ ಇಂದ್ರಾಣಿ ಮುಖರ್ಜಿ ಶುಕ್ರವಾರ ಬೈಕುಲ್ಲಾ ಜೈಲಿನಿಂದ ಆರೂವರೆ ವರ್ಷಗಳ ನಂತರ ಹೊರಬಂದಿದ್ದಾರೆ.
ಜೈಲಿನಿಂದ ಹೊರಬಂದು ಮಾಧ್ಯಮದವರಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ನನ್ನ ಮಗಳು ಇನ್ನೂ ಜೀವಂತವಾಗಿದ್ದಾಳೆ ಮತ್ತು ತನಗೆ ನೋವುಂಟು ಮಾಡಿದ ಜನರನ್ನು ಕ್ಷಮಿಸಿದ್ದೇನೆ ಎಂದರು.
ಇನ್ನು ನಾನು ಈಗ ಮನೆಗೆ ಹೋಗುತ್ತಿದ್ದೇನೆ. ನನಗೆ ಯಾವುದೇ ಯೋಜನೆಗಳಿಲ್ಲ. ಮನೆಯಲ್ಲಿರಲು ನಾನು ಬಯಸುತ್ತೇನೆ. ನಾನು ಜೈಲಿನಲ್ಲಿ ಬಹಳಷ್ಟು ಕಲಿತಿದ್ದೇನೆ. ನನ್ನ ಮುಂದಿನ ಸಂದರ್ಶನದಲ್ಲಿ ನಾನು ಅದರ ಬಗ್ಗೆ ಮಾತನಾಡುತ್ತೇನೆ. ಎಂದಿದ್ದಾರೆ.
2012ರಲ್ಲಿ ಶೀನಾಳನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆಕೆಯ ದೇಹವನ್ನು ಮುಂಬೈನ ಹೊರವಲಯದಲ್ಲಿರುವ ಹೊಂಡದಲ್ಲಿ ಎಸೆಯಲಾಗಿತ್ತು.
ಇನ್ನು ಇಂದ್ರಾಣಿ ಮುಖರ್ಜಿಯವರ ಪತಿ ಪೀಟರ್ ಮುಖರ್ಜಿ ಅವರು ಇತರ ಇಬ್ಬರೊಂದಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈ ಪ್ರಕರಣದಲ್ಲಿ ಪೀಟರ್ ಮುಖರ್ಜಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ.