ಹೈದರಬಾದ್, ಮೇ 21 (DaijiworldNews/MS): ಮೋಟರ್ ಬೈಕ್ನ ಹಿಂಬದಿ ಚಕ್ರಕ್ಕೆ ಬುರ್ಖಾ ಸಿಲುಕಿದ ಪರಿಣಾಮ 18 ವರ್ಷದ ಪದವಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಯಾಚಾರಂನಲ್ಲಿ ನಡೆದಿದೆ.
ಯಾಚಾರಂ ನಿವಾಸಿಯಾಗಿದ್ದ ಸನಾ , ಪದವಿ ವಿದ್ಯಾರ್ಥಿನಿಯಾಗಿದ್ದು ತನ್ನ ಸೋದರನೊಂದಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಬುರ್ಖಾ ಹಿಂಬದಿಯ ಚಕ್ರಕ್ಕೆ ಸುತ್ತಿಕೊಂಡಿದೆ. ಹೀಗಾಗಿ ಇಬ್ಬರೂ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಆದರೆ, ಯುವತಿಗೆ ಗಂಭೀರ ಗಾಯಗಳಾಗಿತ್ತು ಎನ್ನಲಾಗಿದ್ದು, ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ವಿಡಿಯೋವನ್ನು ತೆಲಂಗಾಣದ ಸಾರಿಗೆ ನಿಗಮದ ಎಂಡಿ ವಿಸಿ ಸಜ್ಜನರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, 'ಮಹಿಳೆಯರೇ, ನೀವು ಬೈಕ್ನಲ್ಲಿ ಕುಳಿತುಕೊಳ್ಳುವಾಗ ಎಚ್ಚರಿಕೆವಹಿಸಿ ' ಎಂದು ಮನವಿ ಮಾಡಿದ್ದಾರೆ.