ಬೆಂಗಳೂರು, ಮೇ 20 (DaijiworldNews/DB): ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದಿದ್ದ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ 54ನೇ ಸಿಸಿಎಚ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
11 ಅಪರಾಧಿಗಳ ಪೈಕಿ ಸೋಭುಜ್ ಶೇಖ್, ರಿದಯ್ ಬಾಬು, ರಕಿಬುಲ್ ಇಸ್ಲಾಂ ಸಾಗರ್, ಮಹಮ್ಮದ್ ಬಾಬು, ರಫ್ಸಾನ ಮಂಡಲ್, ತಾನಿಯಾ ಲೇ, ದಾಲಿಮ್, ಅಜೀಂ, ಜಮಾಲ್ ಸೇರಿ 9 ಮಂದಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಉಳಿದ ಇಬ್ಬರಿಗೆ ನ್ಯಾಯಾಲಯ ಪ್ರತ್ಯೇಕ ಶಿಕ್ಷೆ ವಿಧಿಸಿದ್ದು, ಅಪರಾಧಿ ತಾನ್ಯಾ ಎಂಬಾತನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಜಮಾಲ್ ಎಂಬುವವನಿಗೆ ಫಾರಿನ್ ಆಕ್ಟ್ ಅನ್ವಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ನ್ಯಾಯಾಧೀಶ ಎನ್. ಸುಬ್ರಹ್ಮಣ್ಯ ಅವರು ತೀರ್ಪು ಪ್ರಕಟಿಸಿದ್ದಾರೆ.
2021ರ ಮೇ18 ರಂದು ಘಟಿಸಿದ್ದಈ ಕೃತ್ಯವು ಇಡೀ ಬೆಂಗಳೂರಿನ್ನೇ ನಡುಗಿಸಿದ ಪೈಶಾಚಿ ಕೃತ್ಯವಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಒಂದು ವರ್ಷಗಳ ಬಳಿಕ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.