ನವದೆಹಲಿ, ಮೇ 20 (DaijiworldNews/DB): ಮುಂಬರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ. ಈಗಿನ ಕಾಂಗ್ರೆಸ್ ನಾಯಕತ್ವ ಅದೇ ರೀತಿಯಲ್ಲಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಉದಯಪುರದಲ್ಲಿ ಚಿಂತನ ಶಿಬಿರ ನಡೆಸಿರುವುದರಿಂದ ಕಾಂಗ್ರೆಸ್ ಏನೂ ಸಾಧಿಸಿಲ್ಲ. ಯಥಾಸ್ಥಿತಿಯನ್ನೇ ಮುಂದುವರಿಸಲು ಆ ಶಿಬಿರದಲ್ಲಿ ನಿರ್ಧಾರವಾಗಿದೆಯೇ ಹೊರತು ಹೊಸತೇನೂ ಆಗಿಲ್ಲ. ಗುಜರಾತ್ ಮತ್ತು ಹಿಮಾಚಲಪ್ರದೇಶದ ಚುನಾವಣೆಯಲ್ಲಿ ಸೋಲಲು ಸ್ವಲ್ಪ ಸಮಯ ನೀಡಿದೆ. ಇದರ ಹೊರತು ಇನ್ನೇನಿಲ್ಲ ಎಂದಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹರಡಿದ್ದವು. ಆದರೆ ಬಳಿಕದ ಬೆಳವಣಿಗೆಯಲ್ಲಿಅವರು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ನಡುವೆ ಪ್ರಶಾಂತ್ ಕಿಶೋರ್ ಅವರು ಅಧಿಕಾರ, ಚುನಾವಣಾ ನಿರ್ವಹಣೆ ವಿಚಾರದಲ್ಲಿ ಮುಕ್ತವಾದ ಅವಕಾಶ ಬಯಸ್ಸಿದ್ದರು. ಆದರೆ ಕಾಂಗ್ರೆಸ್ ಇದನ್ನು ಒಪ್ಪಲಿಲ್ಲ ಎನ್ನಲಾಗಿದೆ.