ರುದ್ರಪುರ, ಮೇ 20 (DaijiworldNews/HR): ಉತ್ತರಾಖಂಡದ ರುದ್ರಪುರದಲ್ಲಿ ಯುವಕನೊಬ್ಬ 38 ವರ್ಷದ ಮಲತಾಯಿಯೊಂದಿಗೆ ಪ್ರೇಮಾಂಕುರವಾಗಿ, ಓಡಿ ಹೋಗಿ ವಿವಾಹವಾದ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆಯಿಂದ ಆಘಾತಗೊಂಡಿರುವ ತಂದೆ ಪುತ್ರನ ವಿರುದ್ಧವೇ ದೂರು ನೀಡಿದ್ದಾರೆ.
55 ವರ್ಷದ ತಂದೆ 11 ವರ್ಷ ಹಿಂದೆ ಮೊದಲ ಪತ್ನಿ ನಿಧನರಾದ ಬಳಿಕ ಎರಡನೇ ವಿವಾಹವಾಗಿದ್ದು, ಈ ಎರಡನೇ ಪತ್ನಿಯನ್ನೇ ಈಗ ಮೊದಲ ಪತ್ನಿಯ ಪುತ್ರ ವಿವಾಹವಾಗಿದ್ದಾನೆ.
ಇನ್ನು ನನ್ನ ಮೊದಲನೇ ಪತ್ನಿಯ ಪುತ್ರ, ನನ್ನ ಎರಡನೇ ಪತ್ನಿಯನ್ನು ಅಕ್ರಮವಾಗಿ ವಿವಾಹವಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಎರಡನೇ ಪತ್ನಿ ನನ್ನ ಜತೆಗೆ ಮನೆಗೆ ಮರಳಲು ನಿರಾಕರಿಸಿದ್ದಾಳೆ. ಆಕೆ ಮನೆಯಿಂದ 20000 ರೂಪಾಯಿ ತೆಗೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.