ನವದೆಹಲಿ, ಮೇ 20 (DaijiworldNews/DB): ಸುಪ್ರೀಂ ಕೋರ್ಟ್ನಿಂದ ದೋಷಿ ಎಂದು ತೀರ್ಪು ಹೊರಬರುವ ಎರಡು ಗಂಟೆಗೂ ಮುನ್ನ ಪಂಜಾಬ್ ಪ್ರದೇಶ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಆನೆ ಸವಾರಿ ಮಾಡಿದ್ದರು ಎನ್ನಲಾಗಿದೆ.
ಹಣದುಬ್ಬರದ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ಅವರು, ಪಟಿಯಾಲಾದ ಕಿರಿಮಾರ್ಗಗಳಲ್ಲಿ ಆನೆ ಸವಾರಿ ಮಾಡಿದ್ದರು. ಇದನ್ನು ದಿನ ಮುಂಚಿತವಾಗಿಯೇ ಯೋಜಿಸಿದ್ದರು. ಅಲ್ಲದೆ, ಪಕ್ಷದಲ್ಲಿರುವ ತಮ್ಮ ಬೆಂಬಲಿಗರನ್ನೂ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆದಿದ್ದರು. ಆನೆಗೆ ಕೇಸರಿ ಬಟ್ಟೆ ಹೊದಿಸಲಾಗಿತ್ತು. ಬೆಲೆ ಏರಿಕೆ ವಿರುದ್ದಾನೆ ಪ್ರತಿಭಟನೆ ಎಂಬ ಬ್ಯಾನರ್ ಜೊತೆ ಪ್ರತಿಭಟನೆ ನಡೆಸಿದ್ದರು. ಆಹಾರ ಪದಾರ್ಥ, ಸಾರಿಗೆ, ನಿರ್ಮಾಣ, ವಸತಿ, ಆರೋಗ್ಯ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಭಾರತೀಯರ ಉಳಿವಿಗಾಗಿ ಈ ಹೋರಾಟ ನಡೆಯುತ್ತಿದೆ ಎಂದವರು ಈ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಎರಡು ಗಂಟೆಯಲ್ಲಿ ಮೂರು ದಶಕಗಳ ಹಿಂದಿನ ಗಲಭೆ ಪ್ರಕರಣದಲ್ಲಿ ಸಿಧು ದೋಷಿ ಎಂದು ನ್ಯಾಯಾಲಯ ಘೋಷಣೆ ಮಾಡಿತು.