ನವದೆಹಲಿ, ಮೇ 20 (DaijiworldNews/HR): ಟಾಟಾ ಗ್ರೂಪ್ನ ಏರ್ ಇಂಡಿಯಾದ ಎ320ನಿಯೊ ವಿಮಾನವು ಬೆಂಗಳೂರಿಗೆ ಹೊರಟಿದ್ದು, ಟೇಕ್ ಆಫ್ ಆದ ಕೇವಲ 27 ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ವಿಮಾನದ ಎಂಜಿನ್ಗಳ ಪೈಕಿ ಒಂದು ಎಂಜಿನ್ ಅನ್ನು ತಾಂತ್ರಿಕ ದೋಷದಿಂದಾಗಿ ಆಗಸದಲ್ಲೇ ಸ್ಥಗಿತಗೊಳಿಸಲಾಗಿದ್ದು, ಬೇರೆ ವಿಮಾನದ ಮೂಲಕ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಬೆಳಿಗ್ಗೆ 9.43ಕ್ಕೆ ವಿಮಾನವು ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳ ನಂತರ ಇಂಜಿನ್ಗಳಲ್ಲಿ ಹೆಚ್ಚಿನ ತಾಪಮಾನದ ಬಗ್ಗೆ ಪೈಲಟ್ಗಳಿಗೆ ಎಚ್ಚರಿಕೆ ಸಂದೇಶ ಬಂದಿದ್ದು, ಬಳಿಕ ಒಂದು ಎಂಜಿನ್ ಸ್ಥಗಿತಗೊಳಿಸಿದ ಪೈಲಟ್, ವಿಮಾನವನ್ನು ಬೆಳಿಗ್ಗೆ 10.10ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ.