ನವದೆಹಲಿ,ಮೇ 20 (DaijiworldNews/HR): ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಅವರಿಗೆ ರಸ್ತೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆ 1 ವರ್ಷ ಜೈಲುಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಇದೀಗ ಸಿಧು ವೈದ್ಯಕೀಯ ಕಾರಣಗಳಿಗಾಗಿ ಶರಣಾಗಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದಾರೆ.
ನವಜೋತ್ ಸಿಧು ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರನ್ನು ಸಂಪರ್ಕಿಸುವಂತೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ತಿಳಿಸಿದ್ದರು.
ಇನ್ನು ಕಾನೂನಿನ ಗಾಂಭೀರ್ಯಕ್ಕೆ ಶರಣಾಗುತ್ತೇನೆ ಎಂದು ಗುರುವಾರ ಸಿಧು ತಿಳಿಸಿದ್ದು, ಇಂದು ಪಂಜಾಬ್ನ ಪಟಿಯಾಲದ ನ್ಯಾಯಾಲಯದಲ್ಲಿ ಶರಣಾಗಲಿದ್ದಾರೆ ಎಂದು ವರದಿ ತಿಳಿಸಿದೆ.