ನವದೆಹಲಿ, ಮೇ 20 (DaijiworldNews/MS): "ದೇಶದ ಪ್ರಮುಖ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ಮೇಲೆ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಸಿಟ್ಟನ್ನು ಹೊರಹಾಕುತ್ತಿದೆ" ಎಂದು ಗುಜರಾತ್ನ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಇಂದು ಆರೋಪಿಸಿದ್ದಾರೆ.
ಒಬ್ಬ ಉದ್ಯಮಿ ತನ್ನ ಸ್ವಂತ ಪರಿಶ್ರಮದಿಂದ ಮೇಲಕ್ಕೆ ಬರುತ್ತಾನೆ. ನೀವು ಪ್ರತಿ ಬಾರಿಯೂ ಅದಾನಿ ಅಥವಾ ಅಂಬಾನಿಯನ್ನು ನಿಂದಿಸಲು ಸಾಧ್ಯವಿಲ್ಲ. ಪ್ರಧಾನಿ ಪ್ರಧಾನಿಯವರ ತವರು ರಾಜ್ಯ ಗುಜರಾತ್ ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿಸಲು ಸಾಧ್ಯವಿಲ್ಲ .ಅಂಬಾನಿ ಮತ್ತು ಅದಾನಿ ಮೇಲೆ ನಿಮ್ಮ ಕೋಪವನ್ನು ಏಕೆ ಹೊರಹಾಕಬೇಕು?" ಇದು ಜನರನ್ನು ದಾರಿತಪ್ಪಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ತಮ್ಮ ಮೂರು ವರ್ಷಗಳ ರಾಜಕೀಯ ಜೀವನವನ್ನು ವ್ಯರ್ಥ ಮಾಡಿದ್ದೇನೆ" ಎಂದು ಹೇಳಿದ ಅವರು ಹಾರ್ದಿಕ್ ಪಟೇಲ್ ಪಕ್ಷದೊಂದಿಗೆ ಗುರುತಿಸದಿದ್ದರೆ, "ಗುಜರಾತ್ಗಾಗಿ ಉತ್ತಮವಾಗಿ ಕೆಲಸ ಮಾಡಬಹುದಿತ್ತು" ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೈ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಅವರು "ಪಕ್ಷದಲ್ಲಿದ್ದಾಗ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ ಅಥವಾ ಕಾಂಗ್ರೆಸ್ ನನಗೆ ಯಾವುದೇ ಕೆಲಸವನ್ನೂ ನೀಡಿಲ್ಲ ಎಂದು ಪಕ್ಷದ ಬಗ್ಗೆ ಅಸಮಾಧಾನವಿದೆ ತೋರ್ಪಡಿಸಿಕೊಂಡರು.