ಬೆಂಗಳೂರು, ಮೇ 20 (DaijiworldNews/MS): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ ೩.೩೦ರ ಸುಮಾರಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿರುವ ಘಟನೆ ನಡೆದಿದೆ.
ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ಕಾಲ್ ಕಡಿತ ಮಾಡಿದ್ದ. ಹೀಗಾಗಿ ಕೆಲ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತಂಕ ನಿರ್ಮಾಣವಾಗಿತ್ತು. ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ನಗರದ ಕಂಟ್ರೋಲ್ ರೂಮ್ಗೆ ಅಪರಿಚಿತ ವ್ಯಕ್ತಿ ಬೆಳಗಿನ ಜಾವ 3.30ರ ಸುಮಾರಿಗೆ ಗಂಟೆಗೆ ಕರೆಯನ್ನು ಮಾಡಿದ್ದು ಈ ವಿಚಾರವನ್ನು ಏರ್ ಪೋರ್ಟ್ ಪೊಲೀಸರಿಗೆ ರವಾನಿಸಲಾಗಿತ್ತು. ಬಾಂಬ್ ನಿಷ್ಟ್ರಿಯ ದಳದೊಂದಿಗೆ ಪೊಲೀಸರು ಸತತ ಎರಡು ಗಂಟೆಗಳಿಂದ ತಪಾಸಣೆಯನ್ನು ನಡೆಸಿದ್ದಾರೆ. ಈವರೆಗೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಹೀಗಾಗಿ ಇದೊಂದು ಹುಸಿಬಾಂಬ್ ಕರೆ ಇರಬಹುದು ಎನ್ನಲಾಗಿದೆ. ಆದರೂ ತೀವ್ರ ಎಚ್ಚರಿಕೆ ವಹಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಚಿಂಚು ತಪಾಸಣೆಯನ್ನು ಮಾಡುತ್ತಿದ್ದಾರೆ.