ನವದೆಹಲಿ, ಮೇ 19 (DaijiworldNews/HR): ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಪಕ್ಷದ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಅವರು ದೆಹಲಿಯಲ್ಲಿ ಇಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಸುನೀಲ್ ಜಾಖರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ನಡ್ಡಾ, ಜಾಖರ್ ಅವರನ್ನು ನಾನು ಭಾರತೀಯ ಜನತಾ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಸ್ವತಃ ಹೆಸರು ಮಾಡಿದ ಅನುಭವಿ ರಾಜಕೀಯ ನಾಯಕರಾಗಿದ್ದಾರೆ ಎಂದರು.
ಇನ್ನು ಸುನಿಲ್ ಜಾಖರ್ ಮಾತನಾಡಿ, ನನ್ನ ಕುಟುಂಬದ ಮೂರು ತಲೆಮಾರಿನವರು ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ್ದು, ಇಂದು ಪಂಜಾಬ್ನಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ಸಹೋದರತ್ವದ ವಿಷಯಗಳಲ್ಲಿ ನಾನು ಕಾಂಗ್ರೆಸ್ ಜೊತೆಗಿನ 50 ವರ್ಷಗಳ ಸಂಬಂಧವನ್ನು ಮುರಿದಿದ್ದೇನೆ ಎಂದು ಹೇಳಿದ್ದಾರೆ.