ಬೆಂಗಳೂರು, ಮೇ 19 (DaijiworldNews/MS): ಇನ್ನೊಮ್ಮೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ " ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ. ಇದರರ್ಥ ಡಿಕೆಶಿವಕುಮಾರ್ ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ?" ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , ಆದರೆ, ಹೋದರೆ, ಅರೆರೆ..!ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅವರಿಗೆ ಈಗ ಇದೆಂತ ದಲಿತ ಪ್ರೀತಿ!? ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ನಾಯಕ ಇನ್ನೊಬ್ಬರಿಲ್ಲ. ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನಕ್ಕಾಗಿ ಡಾ.ಜಿ. ಪರಮೇಶ್ವರ್ ಅವರ ನಾಯಕತ್ವವನ್ನೇ ಮುಗಿಸಿದ ಸಿದ್ದರಾಮಯ್ಯ ಅವರು ದಲಿತರ ಸಾಲ ಮನ್ನಾದ ಬಗ್ಗೆ ಮಾತನಾಡುವುದು ಬೂಟಾಟಿಕೆಯಲ್ಲವೇ? ಎಂದು ಕುಹಕವಾಡಿದೆ.
ಸಿದ್ದರಾಮಯ್ಯನವರೇ, ನೀವು ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರಿ?ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ.ಇದರರ್ಥ ಡಿಕೆಶಿ ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ? ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಅದನ್ನು ಸಿದ್ದರಾಮಯ್ಯ ಅವರು ಮೀರ್ಸಾದಿಕ್ ತನದಿಂದ ಸದ್ದಡಗಿಸುತ್ತಿದ್ದರು.ನನಗಿಂತರ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ "ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ" ಎಂಬ ಸಂದೇಶ ರವಾನಿಸಿದ್ದು ಸುಳ್ಳೇ? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಅವರೇ, ಇದು ನೀವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 358 ದಲಿತರು ಕೊಲ್ಲಲ್ಪಟ್ಟಿದ್ದು, 801 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾದರು. 9081 ದಲಿತ ದೌರ್ಜನ್ಯದ ಪ್ರಕರಣ ನಡೆದಿತ್ತು ಎಂದು ದಲಿತರ ಮೇಲಿನ ದೌರ್ಜನ್ಯದ ವಿವರವನ್ನು ಬಿಜೆಪಿ ನೀಡಿ "ನೀವು ಮತ್ತೊಮ್ಮೆ ಸಿಎಂ ಆದರೆ ದಲಿತರ ಪಾಡೇನು?" ಎಂದು ಪ್ರಶ್ನಿಸಿದೆ.