ನವದೆಹಲಿ, ಮೇ 19 (DaijiworldNews/HR): ಮೇ. 20ರಂದು(ನಾಳೆ) ಜ್ಞಾನ್ವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದ್ದು, ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ನ್ಯಾಯಾಲಯ ತಡೆ ನೀಡಿದೆ.
ತನ್ನ ವರದಿಯನ್ನು ಮೇ.17ರೊಳಗೆ ಸಲ್ಲಿಸುವಂತೆಯೂ ಆದೇಶಿಸಿದ್ದು, ವರದಿ ಸಲ್ಲಿಸಲು ಎರಡು ದಿನ ಸರ್ವೆ ಅಧಿಕಾರಿಗಳು ಕೋರಿಕೊಂಡ ಕಾರಣ ಅವಕಾಶ ನೀಡಲಾಗಿತ್ತು. ಅದರಂತೆ ಇಂದು ಜ್ಞಾನವಾಪಿ ಮಸೀದಿಯ ಸರ್ವೆ ವರದಿಯನ್ನು ಕೋರ್ಟ್ ಗೆ ಸರ್ವೆ ಅಧಿಕಾರಿಗಳು ಸಲ್ಲಿಸಿದ್ದಾರೆ.
ಇಂದು ವಾರಣಾಸಿಯ ಸಿವಿಲ್ ಕೋರ್ಟ್ ಗೆ ಮೇ.14ರಿಂದ 16ರವರೆಗೆ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆ ಕಾರ್ಯ ನಡೆಸಿದ್ದಂತ ಸುಮಾರು 12 ಪುಟಗಳ ವರದಿಯನ್ನು ಸಲ್ಲಿಸಿದೆ.