ನವದೆಹಲಿ, ಮೇ 19 (DaijiworldNews/HR): ಈ ವರ್ಷದಿಂದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ನಾತಕೋತ್ತರ ಕೋರ್ಸ್ಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು (ಸಿಯುಇಟಿ) ನಡೆಸಲು ನಿರ್ಧರಿಸಿದೆ.
ಈ ಕುರಿತು ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ ಮಾಹಿತಿ ನೀಡಿದ್ದು, ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ನಡೆಸಲಾಗುವುದು ಮತ್ತು ಅರ್ಜಿ ಪ್ರಕ್ರಿಯೆ ಇಂದು ಪ್ರಾರಂಭವಾಗಲಿದ್ದು, ಜೂನ್ 18 ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇನ್ನು ಇಲ್ಲಿಯವರೆಗೆ 10.46 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸಿಯುಇಟಿ-ಯುಜಿಗೆ ನೋಂದಾಯಿಸಿಕೊಂಡಿದ್ದು, ಸಿಯುಇಟಿ-ಯುಜಿ ನೋಂದಣಿಗೆ ಮೇ 22 ಕೊನೆಯ ದಿನಾಂಕವಾಗಿದೆ.
ಯುಸಿಇಟಿ ಯುಜಿ 2022ಗೆ ಅರ್ಜಿ ಸಲ್ಲಿಸಲು samarth.edu.in ನಲ್ಲಿ ಸಿಯುಇಟಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಮುಖಪುಟದಲ್ಲಿ ಲಭ್ಯವಿರುವ ಕ್ಯೂಇಟಿ 2022 ಲಿಂಕ್ ಅನ್ನು ಒತ್ತಿ ನೋಂದಣಿ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.