ಬೆಂಗಳೂರು, ಮೇ 19 (DaijiworldNews/HR): ರಾಜಕಾರಣಿ, ನಟ ಪ್ರಕಾಶ್ ರಾಜ್ ಅವರು ಹೊಸ ವೇಷ ತೊಟ್ಟ ಪೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ.
ಇತ್ತೀಚೆಗೆ ಗಿರಿಧಾಮವೊಂದಕ್ಕೆ ಭೇಟಿ ನೀಡಿದ್ದ ಪ್ರಕಾಶ್ ರಾಜ್ ಅಲ್ಲಿಯ ಆಕರ್ಷಕ ವೇಷ ತೊಟ್ಟು ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿ, ನೋಡಿ, ಇದು ನಾನು ನಮ್ಮ ಸರ್ವೋಚ್ಚ ನಾಯಕನಿಂದ ಪ್ರಭಾವಿತನಾಗಿ ಈ ವೇಷ ಹಾಕಿಕೊಂಡಿದ್ದೇನೆ. ಸ್ನೇಹಿತರೇ ನೀವು ಏಕೆ ಇದನ್ನು ಪ್ರಯತ್ನಿಸಬಾರದು? ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಕಾಲೆಳದಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು ದೇಶ, ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿಶೇಷ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದು, ಪ್ರಕಾಶ್ ರಾಜ್ ಟ್ವೀಟ್ ಗೆ ಪರ ವಿರೋಧ ವ್ಯಕ್ತವಾಗಿದೆ.