ಅಹಮದಾಬಾದ್, ಮೇ 19 (DaijiworldNews/HR): ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗುಜರಾತ್ನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ವಕ್ತಾರ ಡ್ಯಾನಿಶ್ ಖುರೇಷಿನನ್ನು ಅಹಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಖುರೇಷಿ ವಿರುದ್ಧ ಶಿವಲಿಂಗ ಕುರಿತಾಗಿ ಮೇಲೆ ಆಕ್ಷೇಪಾರ್ಹ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದೆ.
ಇನ್ನು ವಾರಾಣಸಿ ವಿಶ್ವನಾಥ ದೇವಾಲಯದ ಬಳಿಯಿರುವ ಮಸೀದಿಯಲ್ಲಿ ಮೂರು ದಿನ ನಡೆದ ಸರ್ವೇಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಸಂಸ್ಥೆಗಳ ಪರ ವಕೀಲರು ಹೇಳಿದ್ದು, ಮಸೀದಿಯ ಆಡಳಿತ ಮಂಡಳಿ ಇದನ್ನು ಅಲ್ಲಗಳೆದಿದ್ದು, ಇದು ಶಿವಲಿಂಗವಲ್ಲ. ಇದು ನೀರಿನ ಫೌಂಟನ್ ಎಂದಿದೆ.