ಮುಂಬೈ,, ಮೇ 18 (DaijiworldNews/DB): ಭಾರತೀಯ ನೌಕಾ ಪಡೆಗೆ ಹೊಸದಾಗಿ ಎರಡು ಯುದ್ದ ನೌಕೆಗಳು ಸೇರ್ಪಡೆಯಾಗಿವೆ. ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂಬೈನಲ್ಲಿ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಹೊಸ ಯುದ್ಧ ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾ ಪಡೆಯ ಶಸ್ತ್ರಾಗಾರಕ್ಕೆ ಇನ್ನಷ್ಟು ಬಲ ಬಂದಿದೆ. ಭಾರತದ ಸಾಮರ್ಥ್ಯ ಮತ್ತು ಸ್ವಂತ ಬಲ ಹೇಗಿದೆ ಎಂಬುದನ್ನು ಇಡೀ ಪ್ರಪಂಚಕ್ಕೇ ಇದು ತೋರಿಸಿಕೊಡಲಿದೆ. ಅಲ್ಲದೆ ಎರಡೂ ಯುದ್ದನೌಕೆಗಳನ್ನು ದೇಶೀಯವಾಗಿ ನಿರ್ಮಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬಿದಂತಾಗಿದೆ. ಮೇಕ್ ಫಾರ್ ವಲ್ಡ್ಗೂ ಭಾರತ ಅಣಿಯಾಗಿದ್ದು, ಬೇರೆ ದೇಶಗಳು ಕೇಳಿದ್ದಲ್ಲಿ ಅವರಿಗೂ ನಾವು ತಯಾರಿಸಿಕೊಡಲು ಸಿದ್ಧ ಎಂದರು.
ಆತ್ಮನಿರ್ಭರ ಭಾರತ ಯೋಜನೆ ಸಾಕಾರಕ್ಕೆ ನಮ್ಮ ಒತ್ತು. ರಷ್ಯಾಪ-ಉಕ್ರೇನ್ ಯುದ್ದ, ಕೊರೊನಾದಂತಹ ಕಠಿಣ ಸಂದರ್ಭದಲ್ಲಿಯೂ ಭಾರತ ಸರ್ಕಾರವು ನೌಕಾಪಡೆಯ ಬಲವರ್ಧನೆಯ ಭರವಸೆಗೆ ಬದ್ದವಾಗಿದೆ ಎಂದವರು ತಿಳಿಸಿದೆ.
ಮುಂಬೈನ ಮಾಜ್ಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್) ಸಂಸ್ಥೆಯು ಈ ಎರಡು ನೂತನ ಯುದ್ಧ ನೌಕೆಗಳನ್ನು ನಿರ್ಮಿಸಿದೆ.