ಹೈದರಾಬಾದ್, ಮೇ 18 (DaijiworldNews/DB): ಬಿಜೆಪಿಯು ದೇಶವನ್ನು 1990ನೇ ಇಸವಿಗೆ ಮರಳಿ ಕೊಂಡೊಯ್ಯುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಿಡಿ ಕಾರಿದ್ದಾರೆ.
ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ದ ಹರಿ ಹಾಯ್ದಿರುವ ಅವರು, ವೀಡಿಯೊ ಸಮೀಕ್ಷೆ ವೇಳೆ ಮಸೀದಿಯ ಒಳಗೆ ಶಿವಲಿಂಗ ಪತ್ತೆಯಾಗಿಲ್ಲ. ಅದು ಕಾರಂಜಿಯಾಗಿದೆ. ಈ ರೀತಿ ಮುಂದುವರಿದರೆ ತಾಜ್ ಮಹಲ್ನ ಎಲ್ಲಾ ಕಾರಂಜಿಗಳನ್ನು ಕೂಡಾ ಸ್ಥಗಿತಗೊಳಿಸುವ ಅವಶ್ಯಕತೆ ಬರಬಹುದು ಎಂದರು.
ಮುಸ್ಲಿಮರ ಧಾರ್ಮಿಕ ಆಚರಣೆಗೆ ಅಲ್ಲಿ ಅವಕಾಶವಿದೆ. ಇದನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ನಮಗೆ ಅಲ್ಲಿ ನಮಾಜ್ಗೆ ಅವಕಾಶವಿದೆ ಎಂದವರು ತಿಳಿಸಿದರು.