ಕೋಲ್ಕತ್ತ, ಮೇ 18 (DaijiworldNews/DB): ರಾಜ್ಯಕ್ಕೆ ಭೇಟಿ ನೀಡಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಿಹಿತಿಂಡಿ, ಹೂ ಗುಚ್ಛಗಳ ಸ್ವಾಗತ ನೀಡಿ. ಅತಿಥಿಗಳನ್ನು ನಾವು ಸೌಹಾರ್ದಯುತವಾಗಿಯೇ ನಡೆಸಿಕೊಳ್ಳುತ್ತೇವೆ ಎಂಬುದು ಅವರಿಗೆ ಅರಿವಾಗಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಹೇಳಿದ್ದಾರೆ.
ಭಾಗವತ್ಗೆ ಸೂಕ್ತ ರಕ್ಷಣೆ ಒದಗಿಸಿ. ಆದರೆ ಅವರ ಭೇಟಿ ವೇಳೆ ಯಾವುದೇ ಗಲಭೆ ನಡೆಯದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದಾರೆ.
ಮಮತಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಆರೆಸ್ಸೆಸ್ ಕಾರ್ಯಕಾರಿ ದೇಬಾಸಿಸ್ ಚೌಧರಿ, ಆರೆಸ್ಸೆಸ್ನ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಮಮತಾ ಆಸಕ್ತಿ ಕುತೂಹಲ ಮೂಡಿಸುತ್ತಿದೆ. ಅವರೊಮ್ಮೆ ಇಸ್ಲಾಮಿಕ್ ಸಂಘಟನೆಗಳು ನಡೆಸುತ್ತಿರುವ ತಬ್ಲೀಗ್ ಜಮಾತ್ ಶಿಬಿರಗಳಿಗೆ ಭೇಟಿ ನೀಡಲಿ. ಅಲ್ಲದೆ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದರೆ ಉತ್ತಮ ಎಂದಿದ್ದಾರೆ.