ಬೆಂಗಳೂರು, ಮೇ 18 (DaijiworldNews/MS): ರಾಜ್ಯ ರಾಜಧಾನಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು , ಈ ಸಂದರ್ಭ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ವರದಿಯಾಗಿದೆ. ಕಾವೇರಿ ಪೈಪ್ ಲೈನ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಉತ್ತರಪ್ರದೇಶ ಮೂಲದ ಕಾರ್ಮಿಕ ಅಂಕಿತ್, ಬಿಹಾರದ ದೇವ್ ಭರತ್ ಮೃತಪಟ್ಟ ಕಾರ್ಮಿಕರು ಮೃತಪಟ್ಟವರು . ಘಟನೆಯಲ್ಲಿ ಅದೃಷ್ಟವಶಾತ್ ಒಬ್ಬ ಕಾರ್ಮಿಕ ಪಾರಾಗಿದ್ದಾರೆ.
ನಿನ್ನೆ ಸಂಜೆ ಪೈಪ್ ಲೈನ್ ನಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಭಾರೀ ಮಳೆಯಾದ ಪರಿಣಾಮ ಏಕಾಏಕಿ ಮಣ್ಣು ಕುಸಿದಿದೆ. ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.