ಡೆಹರಾಡೂನ್, ಮೇ 17 (DaijiworldNews/HR): ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಚಾರ್ಧಾಮ್ ಯಾತ್ರೆ ಈ ವರ್ಷದ ಮೇ 3ರಂದು ಮತ್ತೆ ಆರಂಭವಾಗಿದ್ದು, ಈ ವರ್ಷದ ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೂ 41 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಚಾರ್ಧಾಮ್ ಯಾತ್ರೆಯು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಒಳಗೊಂಡಿದ್ದು, ಯಾತ್ರೆ ವೇಳೆ ಸೋಮವಾರ 4 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಈವರೆಗೆ ಒಟ್ಟು 41 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಇನ್ನು ಯಮುನೋತ್ರಿ ಮಾರ್ಗವಾಗಿ 14 ಮಂದಿ ಯಾತ್ರಾರ್ಥಿಗಳು, ಗಂಗೋತ್ರಿ ಮಾರ್ಗವಾಗಿ 4 ಮಂದಿ, ಕೇದರನಾಥ ಮಾರ್ಗವಾಗಿ 15 ಮಂದಿ ಹಾಗೂ ಬದರಿನಾಥ ಮಾರ್ಗದ 8 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.