ಬೆಂಗಳೂರು, ಮೇ 17 (DaijiworldNews/MS): ರಾಜಕೀಯ ನಿವೃತ್ತಿಯ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲಾರಂಭಿಸಿ ಒಂದು ದಶಕವಾಯ್ತು.ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಘೋಷಣೆಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮ್ಮ ಮತ್ತು ಪುತ್ರನ ಟಿಕೆಟ್ ಗಟ್ಟಿ ಮಾಡಿಕೊಳ್ಳಲು ಹೊರಟಿದ್ದಾರೆ. ತನಗಿಂತ, ಪುತ್ರ ಹೆಚ್ಚು ಮತ ಪಡೆದಿದ್ದಾರೆ, ವರುಣಾದಲ್ಲಿ ನನಗಿಂತ ಹೆಚ್ಚು ಜನಪ್ರಿಯ ಎಂಬ ಹೇಳಿಕೆಯ ಅರ್ಥವೇನು? ಪುತ್ರನಿಗೂ ಈಗಲೇ ನೀವು ಟಿಕೆಟ್ ಖಚಿತಪಡಿಸುವುದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇರುವುದೇಕೆ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಂದು ರೀತಿಯಲ್ಲಿ ಕುಟುಂಬವಾದ ಬೆಳೆಸಲು ಹೊರಟಿದ್ದಾರೆ.ಯತೀಂದ್ರ ಜನಪ್ರಿಯ ಶಾಸಕ ಎಂದು ಬಿಂಬಿಸುವ ಮೂಲಕ ತಮ್ಮ ಪುತ್ರನನ್ನು ಮುಖ್ಯಮಂತ್ರಿ ರೇಸ್ಗೆ ತರುವ ಲೆಕ್ಕಾಚಾರವೇ?ಅಥವಾ ಡಿ.ಕೆ ಶಿವಕುಮಾರ್ ಅವರಿಗೆ ಮತ್ತೊಂದು ಸವಾಲೋ ಎಂದು ಕುಟುಕಿದೆ.
ರಾಜಕೀಯ ನಿವೃತ್ತಿಯ ಬಗ್ಗೆ ಸಿದ್ದರಾಮಯ್ಯಮಾತನಾಡಲಾರಂಭಿಸಿ ಒಂದು ದಶಕವಾಯ್ತು.ನಿಜ ಹೇಳಬೇಕೆಂದರೆ ವಲಸೆ ಕಾಂಗ್ರೆಸಿಗರು ಇದಕ್ಕಾಗಿ ದಶಮಾನೋತ್ಸವ ಸಂಭ್ರಮ ಮಾಡಬೇಕಿತ್ತು ಮತ್ತು ಅಲ್ಲಿ ರಾಜಕೀಯ ನಿವೃತ್ತಿ ಘೋಷಣೆಯ ಬೆಳ್ಳಿಹಬ್ಬ ಆಚರಿಸೋಣ ಎಂದು ಆಶಾವಾದ ವ್ಯಕ್ತಪಡಿಸಬೇಕು. ಏಕೆಂದರೆ ನಿಮ್ಮ ಅಧಿಕಾರ ವ್ಯಾಮೋಹ ಅಷ್ಟು ಬಲವಾದದ್ದು ಎಂದು ವ್ಯಂಗ್ಯವಾಡಿದೆ.