ಬೆಂಗಳೂರು, ಮೇ 17 (DaijiworldNews/HR): ವಿಧಾನ ಪರಿಷತ್ನ ಹಂಗಾಮಿ ಸಭಾಪತಿಯನ್ನಾಗಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಮೇ 16ರಂದು ರಾಜೀನಾಮೆ ನೀಡಿದ್ದು, ಈ ಸ್ಥಾನಕ್ಕೆ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮಲ್ಕಾಪುರೆ ಅವರನ್ನು ಸಭಾಪತಿಯನ್ನಾಗಿ ನೇಮಿಸಿ ರಾಜ್ಯಪಾಲ ಥಾವರ್ಚಂದ್ರ ಗೆಹ್ಲೋಟ್ ಅವರು ನೇಮಿಸಿ ಆದೇಶಿಸಿದ್ದಾರೆ.
ಇನ್ನು ವಿಧಾನ ಪರಿಷತ್ ಸದಸ್ಯರಾಗಿರುವ ರಘುನಾಥ್ ರಾವ್ ಮಲ್ಕಾಪುರೆ ಮೂಲತಃ ಬೀದರ್ ಜಿಲ್ಲೆಯವರಾಗಿದ್ದಾರೆ.