ನವದೆಹಲಿ, ಮೇ 17 (DaijiworldNews/HR): ಈ ದಶಕದ ಅಂತ್ಯದ ವೇಳೆಗೆ ನಾವು 6G ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಮತ್ತು ನಮ್ಮ ಕಾರ್ಯಪಡೆಯು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಮೊದಲ 5G ಟೆಸ್ಟ್ಬೆಡ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 5G ನಮ್ಮ ಆರ್ಥಿಕತೆಗೆ 450 ಶತಕೋಟಿ ಡಾಲರ್ ಕೊಡುಗೆ ನೀಡುತ್ತದೆ. ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿಯನ್ನೂ ಹೆಚ್ಚಿಸುತ್ತದೆ ಎಂದರು.
ಇನ್ನು 2ಜಿ ಯುಗ ನೀತಿ ಪಾರ್ಶ್ವವಾಯು, ಭ್ರಷ್ಟಾಚಾರದ ಸಂಕೇತವಾಗಿತ್ತು ಈಗ ರಾಷ್ಟ್ರವು ಪಾರದರ್ಶಕವಾಗಿ 4ಜಿ ಮತ್ತು ಈಗ 5ಜಿಗೆ ಸಾಗಿದೆ ಎಂದು ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.