ಶ್ರೀನಗರ, ಮೇ 16 (DaijiworldNews/HR): ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭದ್ರತಾ ಪಡೆಗಳೊಂದಿಗೆ ಭಯೋತ್ಪಾದಕ ಘಟಕವನ್ನು ಭೇದಿಸಿ ಏಳು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಬಂಧಿಸಿದ್ದು, ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ನಾಲ್ಕು ದ್ವಿಚಕ್ರ ವಾಹನಗಳು ಸೇರಿದಂತೆ ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಉಗ್ರರಲ್ಲಿ ಒಬ್ಬ ಸಕ್ರಿಯ ಪಾಕಿಸ್ತಾನಿ ತರಬೇತಿ ಪಡೆದ ಭಯೋತ್ಪಾದಕರು, ಇಬ್ಬರು ಹೈಬ್ರಿಡ್ ಭಯೋತ್ಪಾದಕರು ಮತ್ತು ನಾಲ್ವರು ಭಯೋತ್ಪಾದಕ ಸಹಚರರು ಸೇರಿದ್ದು, ಪಾಕಿಸ್ತಾನಿ ತರಬೇತಿ ಪಡೆದ ಭಯೋತ್ಪಾದಕನನ್ನು ನಡಿಹಾಲ್ನ ಅನ್ಫಾಲ್ ನಿವಾಸಿ ಆರಿಫ್ ಅಜಾಜ್ ಶೆಹ್ರಿ ಎಂದು ಗುರುತಿಸಲಾಗಿದೆ.
ಇನ್ನು ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ರಾಂಪೋರಾ ನಿವಾಸಿ ಅಜಾಜ್ ಅಹ್ಮದ್ ರೇಶಿ ಮತ್ತು ಗುಂಡ್ಪೋರಾ ನಿವಾಸಿ ಶಾರಿಕ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಬಂಡಿಪೋರಾ ನಿವಾಸಿ ರಿಯಾಜ್ ಅಹ್ಮದ್ ಮಿರ್ ಅಲಿಯಾಸ್ ಮೆತಾ ಶೆಹ್ರಿ, ತೌಹೀದಾಬಾದ್ ಬಾಗ್ ನಿವಾಸಿ ಜಿ ಮೊಹಮ್ಮದ್ ವಾಜಾ ಅಲಿಯಾಸ್ ಗುಲ್ ಬಾಬ್, ಚಿಟ್ಟಿಬಂಡಿ ಅರಗಾಂ ನಿವಾಸಿ ಮಕ್ಸೂದ್ ಅಹ್ಮದ್ ಮಲಿಕ್, ಶೀಮಾ ಶಫಿ ವಾಜಾ, ತೌಹೀದಾಬಾದ್ ಬಾಗ್ ನಿವಾಸಿ ಎಂದು ಗುರುತಿಸಲಾಗಿದೆ.