ಜೈಪುರ, ಮೇ 16 (DaijiworldNews/HR): ಹಿಂದಿನ ಯುಪಿಎ ಸರ್ಕಾರ ಸಶಕ್ತಗೊಳಿಸಿದ್ದ ದೇಶದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೋದಿ ಎರಡು ಹಿಂದೂಸ್ತಾನವನ್ನು ನಿರ್ಮಿಸಲು ಬಯಸುತ್ತಿದ್ದು, ಈ ಪೈಕಿ ಒಂದು ಇಬ್ಬರು ಮೂವರು ಕೈಗಾರಿಕೋದ್ಯಮಿಗಳದ್ದು. ಮತ್ತೊಂದು ದಲಿತರು, ರೈತರು, ಬಡವರು ಮತ್ತು ಹಿಂದುಳಿದವರದ್ದು. ಆದರೆ ಕಾಂಗ್ರೆಸ್ ಒಂದೇ ಹಿಂದೂಸ್ತಾನವನ್ನು ಬಯಸುತ್ತದೆ ಎಂದಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ನಮ್ಮ ಆರ್ಥಿಕತೆಯ ಮೇಲೆ ದಾಳಿ ಮಾಡಿದ್ದು, ಪ್ರಧಾನಿ ನೋಟು ರದ್ದು ಮಾಡಿದರು, ಜಿಎಸ್ಟಿಯನ್ನು ತಪ್ಪಾಗಿ ಅನುಷ್ಠಾನ ಮಾಡಿದರು. ಇವುಗಳಿಂದಾಗಿ ಆರ್ಥಿಕತೆ ನಾಶವಾಗಿದೆ ಎಂದು ಆರೋಪಿಸಿದ್ದಾರೆ.