ಬೆಂಗಳೂರು, ಮೇ 16 (DaijiworldNews/HR): ಈ ಹಿಂದಿನಿಂದಲೂ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಾ ಬರಲಾಗುತ್ತಿದೆ. ರಾಷ್ಟ್ರಗೀತೆ ಹಾಡುತ್ತಿಲ್ಲಾ ಎಂಬುದು ಮುತಾಲಿಕ್ ಅವರ ಸುಳ್ಳು ಆರೋಪ. ಅವರಿಂದ ನಾವು ರಾಷ್ಟ್ರಗೀತೆ ಹಾಡೋದನ್ನು ಕಲಿಯಬೇಕಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡೋದಿಲ್ಲ ಎನ್ನುವಂತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರಗೀತೆಯನ್ನು ಉರ್ದು ಶಾಲೆಯಲ್ಲಿ ಹಾಡಲಾಗುತ್ತಿದೆ. ನಾವು ಈ ಹಿಂದಿನಿಂದಲೂ ಹಾಡಿಕೊಂಡು ಬರ್ತಾ ಇದ್ದೇವೆ. ಆದ್ರೇ ಬೇಕೆಂದೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎನ್ನೋ ವಿವಾದ ಸೃಷ್ಠಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಮಗೆ ಮುತಾಲಿಕ್ ರಾಷ್ಟ್ರಗೀತೆ ಹಾಡಬೇಕು ಎಂದು ಹೇಳಿಕೊಡಬೇಕಾ.? ಇದೆಲ್ಲಾ ಮುಂಬರುವ ವಿಧಾನಸಭಾ ಚುನಾವಣೆಯ ಗಿಮಿಕ್ ಅಷ್ಟೇ. ಈಗ ಅದನ್ನೆಲ್ಲಾ ನಾ ಮಾತನಾಡೋದಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಮಾತನಾಡುವೆ ಎಂದು ಹೇಳಿದ್ದಾರೆ.